ನಿಮ್ಮ ಮನದನಿಗೆ ಸ್ಪಂದಿಸುತ್ತೇವೆ, ಬನ್ನಿ ಮಾತನಾಡೋಣ

ಸಲಹೆಗಾರರೊಂದಿಗೆ ಮಾತನಾಡಿ

ಈ ಸಂಕಷ್ಟದ ಸಮಯದಲ್ಲಿ, ನಾವೆಲ್ಲರು ಯಾರೂ ಊಹಿಸಲಾಗದಂತಹ ನೋವು, ಭಯ, ಆತಂಕ ಹಾಗೂ ಒಂಟಿತನವನ್ನು ಅನುಭವಿಸುತ್ತಿದ್ದೇವೆ. ಕೋವಿಡ್ ಕಾಯಿಲೆ ಬಂದು, ಕುಟುಂಬದ ಹಲವರನ್ನು ನುಂಗಿ ಹಾಕಿ, ಬದುಕುಳಿದವರಿಗೆ ಬರಸಿಡಿಲು ಬಡಿದಂತಾಗಿದೆ. ಇಂಥಹ ಸಮಯದಲ್ಲಿ ನಮ್ಮಲ್ಲಿ ಹಲವರಿಗೆ ನೆರವಿನ ಅವಶ್ಯಕತೆಯಿದೆ, ನೋವನ್ನು ತೋಡಿಕೊಳ್ಳಲು ಯಾರದ್ದಾದರು ಜೊತೆ ಬೇಕಿದೆ.

ಗತಿಸಿ ಹೋದ ದುರಂತವನ್ನು ನಿಭಾಯಿಸಲು ಇಲ್ಲವೇ ಅದರೊಂದಿಗೆ ಹೊಂದಿಕೊಳ್ಳಲು ನೀವು ಸಾಕಷ್ಟು ಕಷ್ಟ ಪಡುತ್ತಿದ್ದೀರಿ ಎಂದು ನಮಗೆ ತಿಳಿದಿದೆ. ಕೆಲವೊಮ್ಮೆ ಅದನ್ನು ನೆನದು ದುಃಖಿಸುವುದೂ ಕಷ್ಟವೆಂದು ನಮಗೆ ಅರ್ಥವಾಗುತ್ತದೆ.

ನಿಮ್ಮ ದುಃಖವನ್ನು ನಿಭಾಯಿಸಲು ನೆರವಾಗುವ, ನುರಿತ ಹಾಗೂ ವೃತ್ತಿಪರ ವ್ಯಕ್ತಿಗಳೊಂದಿಗೆ ಸಂಪರ್ಕ ಕಲ್ಪಿಸಿ ನಾವು ನಿಮ್ಮ ನೆರವಿಗೆ ಬರಲು ಬಯಸುತ್ತೇವೆ. ಈ ಸೇವೆ ಸಂಪೂರ್ಣ ಉಚಿತ, ಈ ಕೆಲಸವನ್ನು ಫೋನ್ ಕರೆ ಇಲ್ಲವೇ ಆನ್ಲೈನ್ ಸಮಾಲೋಚನೆಯ ಮೂಲಕ ನೆರವೇರಿಸಲಾಗುವುದು. ಈ ಸೇವೆಯನ್ನು ನೀಡಲು Let’s Talk India ಇವರ ಜೊತೆ ನಾವು ಕೈಜೋಡಿಸಿದ್ದೇವೆ, ಈ ತಂಡದ ಪರಿಣಿತ ಸಲಹೆಗಾರರು ನಿಮ್ಮ ಜೊತೆ ಮಾತನಾಡಲು ಕಾಯುತ್ತಿದ್ದಾರೆ. 

ನೀವು ಆರೋಗ್ಯ ಕಾರ್ಯಕರ್ತರಾಗಿದ್ದೀರಾ?

ಹಗಲಿರುಳು ನೀವು ಅದೆಷ್ಟು ಕಷ್ಟಪಡುತ್ತಿದ್ದೀರಿ ಎಂದು ನಾವು ಊಹಿಸಲೂ ಸಾಧ್ಯವಿಲ್ಲ. ಈ ಹೋರಾಟದಿಂದ ಹಿಂದೆ ಸರಿಯದೇ ಯಾವಾಗಲೂ ಈ ಹೋರಾಟದಲ್ಲಿ ಉಳಿದುಕೊಳ್ಳಲು ಅದೆಷ್ಟು ಒದ್ದಾಡುತ್ತಿರಬಹುದು ನೀವು! ಆದರೆ ನೀವಿಲ್ಲಿ ಪ್ರಮುಖರು, ನಿಮ್ಮ ಕೆಲಸ ಜೀವಗಳನ್ನು ಉಳಿಸುತ್ತಿದೆ.

ಪ್ರತಿದಿನ ನೀವು ಪಡುವ ಕಷ್ಟ-ಕಾರ್ಪಣ್ಯಗಳು ಎಂಥಹದು, ನಿಮ್ಮ ನೋವು ಎಂಥಹದು, ನಿಮ್ಮ ಒತ್ತಡ ಎಂಥಹದು, ಇವೆಲ್ಲದರ ಬಗ್ಗೆ ಮನಬಿಚ್ಚಿ ಮಾತನಾಡುವ ಮೂಲಕ  ನಾವು ನಿಮಗೆ ನೆರವಾಗಲು ಬಯಸುತ್ತೇವೆ. ಬನ್ನಿ, ನಮ್ಮೊಡನೆ ಮಾತನಾಡಿ.

ನಾವು Manah Wellness ಅವರೊಂದಿಗೆ ಕೈಜೋಡಿಸಿದ್ದೇವೆ. ಇದರ ಪರಿಣಿತ ಸೈಕಲಾಜಿಸ್ಟ್ಗಳು (ಮನಃಶಾಸ್ತ್ರಜ್ಞರು) ಗೌಪ್ಯ ಹಾಗೂ ಉಚಿತವಾದ ಸಮಾಲೋಚನೆಯ ಮೂಲಕ ನಿಮಗೆ ನೆರವಾಗಲಿದ್ದಾರೆ. 


ನಮ್ಮೊಂದಿಗೆ ಕೈಜೋಡಿಸಿ

ಎಮೆರ್ಜೆನ್ಸಿ ಕೌನ್ಸಿಲಿಂಗ್ ಸೇವೆಯ ಮೂಲಕ ಜನ ಸಮುದಾಯವು ಮಾನಸಿಕ ಒತ್ತಡದಿಂದ ಪಾರಾಗುವಂತೆ ನೆರವಾಗಲು, ನಾವೊಂದು ಮಾನಸಿಕ ಆರೋಗ್ಯ ಸಹಾಯವಾಣಿಯನ್ನು ಆರಂಭಿಸಲಿದ್ದೇವೆ. ಲಾಕ್ಡೌನ್ ಸಂದರ್ಭದಲ್ಲಿ ಜನರು ಎದುರಿಸುವ ಮಾನಸಿಕ ಆರೋಗ್ಯದ ಸಮಸ್ಯೆಗಳು, ಅಂದರೆ ಒತ್ತಡ, ಒಂಟಿತನ, ಆತಂಕ, ಭಯ ಹಾಗೂ ಅಸಹಾಯಕತೆಯಂತಹ ಸಮಸ್ಯೆಗಳನ್ನು ಬಗೆಹರಿಸಲು ಇದು ನೆರವಾಗಲಿದೆ.

ನೀವು ನುರಿತ ಆಪ್ತ-ಸಲಹೆಗಾರರಾಗಿದ್ದರೆ, ಸ್ವಯಂ ಸೇವಕರಾಗಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ಈ ಸಂಕಷ್ಟದ ಸಮಯದಲ್ಲಿ ಇನ್ನೊಬ್ಬರಿಗೆ ನೆರವಾಗಲು ಬಯಸುವ ನಿಮಗೆ ಅದೆಷ್ಟು ಧನ್ಯವಾದ ತಿಳಿಸಿದರೂ ಸಾಲದು.